ಅತ್ತೂರು
	ಮದ್ರಾಸ್ ರಾಜ್ಯದ ಸೇಲಂ ಜಿಲ್ಲೆಯ ಅತ್ತೂರು ತಾಲ್ಲೂಕಿನ ಆಡಳಿತ ಕೇಂದ್ರ. ಕಾಲರಾಯನ ಬೆಟ್ಟಗಳಿಂದ 3 ಮೈ. ದೂರದಲ್ಲಿ, ವಸಿಷ್ಠ ನದಿಯ ದಂಡೆಯ ಮೇಲಿದೆ. ಪಟ್ಟಣದ ಉತ್ತರಕ್ಕೆ 18ನೆಯ ಶತಮಾನದಲ್ಲಿದ್ದ ಪ್ರಸಿದ್ಧ ಛೆಟ್ಟಿ ಮೊದಲಿಯಾರ್ ಎಂಬುವನಿಗೆ ಸೇರಿದ್ದ ದೊಡ್ಡ ಕೋಟೆಯಿದೆ. ಮುಂದೆ ಈ ಕೋಟೆಯಲ್ಲಿ ಬ್ರಿಟಿಷರು ಸೇನಾ ತುಕಡಿಯನ್ನಿರಿಸಿದ್ದರು.

	1901ರಲ್ಲಿ ಇದು ಒಂದು ಐದನೆಯ ದರ್ಜೆಯ ಪಟ್ಟಣವಾಗಿದ್ದು ಜನಸಂಖ್ಯೆ 1961ರಲ್ಲಿ 29,018ಕ್ಕೆ ಹೆಚ್ಚಿ ಈಗ ಮೂರನೆಯ ದರ್ಜೆಯ ಪಟ್ಟಣವಾಗಿದೆ. ವಿಸ್ತಾರ 6.19 ಚ.ಮೈ.					
(ಎಂ.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ